ಅದಮ್ಯ ವಾಹಿನಿ ಹೊಸ ಬದುಕಿನ ಹೊಸ ಆಶಯವನ್ನು ಇಟ್ಟುಕೊಂಡು ನಿಮ್ಮ ಮುಂದೆ ಬಂದಿದೆ. ಇದರ ಮೂಲ ಉದ್ದೇಶ ಮನುಷ್ಯ ಬಂದುತ್ವ, ಮನುಷ್ಯ ಪ್ರೀತಿಯನ್ನು ಹಂಚುವುದಾಗಿದೆ. ಮನುಷ್ಯ ಮನುಷ್ಯರ ನಡುವೆ ಹುಟ್ಟಿದ ಕಂದಕಗಳನ್ನು ತೊರೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದು ಮುಖ್ಯ ಭೂಮಿಕೆ.
ಜೊತೆಗೆ ಇಂದಿನ ಮಕ್ಕಳು ನಾಳಿನ ಪ್ರಜೆಗಳು ಎಂದೇ ಇಂದಿಗೂ ಮಾತನಾಡುವ ಮನಸುಗಳಿಗೆ ” ಇಂದಿನ ಮಕ್ಕಳು ಇಂದಿನ ಪ್ರಜೆಗಳು ” ಎಂದು ಹೇಳುವ ಗಟ್ಟಿ ಧ್ವನಿಯಾಗುವ ಹಂಬಲ ಅದಮ್ಯ ವಾಹಿನಿಯದ್ದು, ಜೊತೆಗೆ ಮಹಿಳೆ, ವಿಕಲಚೇತನರ ಬಗೆಗೆ ಗೌರವ ತರುವ ಪ್ರಯತ್ನಕ್ಕೆ ಕೊಂಡಿಯಾಗುವ ಕನಸು. ಹೊಸ ಹೊಸ ಉತ್ಸಾಹದ ಮನಸುಗಳಿಗೆ ವೇದಿಕೆ ಕಲ್ಪಿಸುವ ಕಳಕಳಿ ನಮ್ಮದು.
ಸಾಹಿತ್ಯ-ಸಂಸ್ಕೃತಿ, ಕಲೆ ಸೇರಿದಂತೆ ಜನಪದ, ಗ್ರಾಮೀಣ ಸೊಗಡಿನೊಂದಿಗೆ ಹೊಸ ಪುಸ್ತಕ ಸೇರಿದಂತೆ ಏನೆಲ್ಲ ಕೊಡೊದಕ್ಕೆ ಸಾಧ್ಯವೊ ಅದೆಲ್ಲವನ್ನು ಕೊಡುವ ಹಂಬಲಕೆ ನಿಮ್ಮ ಬೆಂಬಲ ಬೇಕು. ನೀವು ನಮ್ಮ ಚಂದಾದಾರರಾಗಿ ನಮ್ಮನ್ನು ಪ್ರೋತ್ಸಾಹಿಸಲು ಕೋರಿಕೆ.
